ನಾನು ಯಾರು – Naanu Yaaru Yaava Ooru Song Lyrics – Antha

PK-Music

ಚಿತ್ರ: ಅಂತ
ಗಾಯಕ: ಎಸ್‌ಪಿಬಿ
ಸಾಹಿತ್ಯ: R N ಜಯಗೋಪಾಲ್
ಸಂಗೀತ: ಜಿ ಕೆ ವೆಂಕಟೇಶ್

ನಾನು ಯಾರು ಯಾವ ಊರು
ಇಲ್ಲಿ ಯಾರು ಬಲ್ಲೋರಿಲ್ಲ

ಮೀನ ಹೆಜ್ಜೆ ಕಂಡೋರುಂಟು
ಬಾನ ಎಲ್ಲೆ ಬಲ್ಲೋರುಂಟು
ನನ್ನ ಬಣ್ಣ ಕಂಡೋರಿಲ್ಲ
ನನ್ ಹೆಸರಲ್ಲೆ ಕಮಾಲ್
ನಾನೆ ಕನ್ವರ್ಲಾಲ್
ನನ್ ಹೆಸರಲ್ಲೆ ಕಮಾಲ್
ನಾನೆ ಕನ್ವರ್ಲಾಲ್
ನಾನು ಯಾರು ಯಾವ ಊರು

ಹೇ ಇಲ್ಲಿ ಯಾರು ಬಲ್ಲೋರಿಲ್ಲ

ಮೀನ ಹೆಜ್ಜೆ ಕಂಡೋರುಂಟು
ಬಾನ ಎಲ್ಲೆ ಬಲ್ಲೋರುಂಟು
ನನ್ನ ಬಣ್ಣ ಕಂಡೋರಿಲ್ಲ
ನನ್ ಹೆಸರಲ್ಲೆ ಕಮಾಲ್
ನಾನೆ ಕನ್ವರ್ಲಾಲ್
ನನ್ ಹೆಸರಲ್ಲೆ ಕಮಾಲ್
ನಾನೆ ಕನ್ವರ್ಲಾಲ್
♫♫♫♫♫♫♫♫♫♫♫♫

ನಂಬಿದೋರ ನೆಂಟ ನಾನು
ಸ್ನೇಹಕ್ಕಾಗಿ ಪ್ರಾಣ ಕೊಡಬಲ್ಲೆ
ಶತ್ರುಗಳ ಶತ್ರು ನಾನು
ದ್ರೋಹಿ ನಿರ್ನಾಮ ಈಗಲೇ
ನನ್ನ ಹಿಂದೆ ಚೂರಿ ಹಾಕೋ
ಜನರನ್ನ ಗುರುತಿಸಬಲ್ಲೆ
ನನ್ನ ದಾರಿ ಅಡ್ಡ ಬರೋ
ವೈರೀ ವಿನಾಶ ಇಲ್ಲೇ
ಯಾರ ಕಡೆ ನಾನು ನನ್ನ ಗುರಿ ಏನು
ನಿಮ್ಮಲ್ಲಿ ಬಲ್ಲೋರು ಯಾರಿಲ್ಲವೆ
ನನ್ ಹೆಸರಲ್ಲೆ ಕಮಾಲ್
ನಾನೆ ಕನ್ವರ್ಲಾಲ್
ನನ್ ಹೆಸರಲ್ಲೆ ಕಮಾಲ್
ನಾನೆ ಕನ್ವರ್ಲಾಲ್
ನಾನು ಯಾರು ಯಾವ ಊರು

ಇಲ್ಲಿ ಯಾರು ಬಲ್ಲೋರಿಲ್ಲ
ಮೀನ ಹೆಜ್ಜೆ ಕಂಡೋರುಂಟು
ಬಾನ ಎಲ್ಲೆ ಬಲ್ಲೋರುಂಟು
ನನ್ನ ಬಣ್ಣ ಕಂಡೋರಿಲ್ಲ

♫♫♫♫♫♫♫♫♫♫♫♫


ಪಾ ಪಾಪ ಪಪಪ ಪಾಪ ಪಪಪ
ಪಾಪ ಪಪ ಪಾ ಪಾಪಪ ಪಪಪ

ಬಣ್ಣ ಬಣ್ಣ ಲೋಕವಿದು
ಮೆರಗನು ಮಾಡಿದೆ ಕಣ್ಣ
ಮಿಂಚಿನಂತೆ ಹೊಳೆಯುವ
ಹೆಣ್ಣಾಸೆಗಾದ ಮೈ ಬಣ್ಣ
ಬಲ್ಲೆ ನಾನು ಇಲ್ಲಿ ಎಲ್ಲಾ
ರಸಿಕರ ಬಗೆ ಬಗೆ ಬಣ್ಣ
ಕಳ್ಳರಲ್ಲಿ ಕಳ್ಳ ನಾನು
ನಂಗೆ ಪೈಪೋಟಿ ಯಾರಣ್ಣ
ಮಾತು ತಪ್ಪೋನಲ್ಲ
ಎಂದು ಅಂಜೋನಲ್ಲ
ನನ್ನಂಥ ದಿಲ್ದಾರು ಯಾರು ಇಲ್ಲ
ನನ್ ಹೆಸರಲ್ಲೆ ಕಮಾಲ್
ನಾನೆ ಕನ್ವರ್ಲಾಲ್
ನನ್ ಹೆಸರಲ್ಲೆ ಕಮಾಲ್
ನಾನೆ ಕನ್ವರ್ಲಾಲ್
ನಾನು ಯಾರು ಯಾವ ಊರು
ಇಲ್ಲಿ ಯಾರು ಬಲ್ಲೋರಿಲ್ಲ
ಮೀನ ಹೆಜ್ಜೆ ಕಂಡೋರುಂಟು
ಬಾನ ಎಲ್ಲೆ ಬಲ್ಲೋರುಂಟು
ನನ್ನ ಬಣ್ಣ ಕಂಡೋರಿಲ್ಲ
ನನ್ ಹೆಸರಲ್ಲೆ ಕಮಾಲ್
ನಾನೆ ಕನ್ವರ್ಲಾಲ್
ನನ್ ಹೆಸರಲ್ಲೆ ಕಮಾಲ್
ನಾನೆ ಕನ್ವರ್ಲಾಲ್

Leave a Reply

Your email address will not be published. Required fields are marked *