ನಾನಿರುವುದೆ ನಿಮಗಾಗೀ – Naaniruvude Nimagaagi Song Lyrics in Kannada – Mayura Kannada Movie Songs Lyrics

ಚಿತ್ರ: ಮಯೂರ



ನಾನಿರುವುದೆ ನಿಮಗಾಗೀ
ನಾನಿರುವುದೆ ನಿಮಗಾಗೀ
ನಾಡಿರುವುದು ನಮಗಾಗೀ
ಕಣ್ಣೀರೇಕೇ ಬಿಸಿಯುಸಿರೇಕೇ
ಕಣ್ಣೀರೇಕೆ ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ
ಬಾಳುವಿರೆಲ್ಲ ಹಾಯಾಗೀ
ನಾನಿರುವುದೆ ನಿಮಗಾಗೀ

♫♫♫♫♫♫♫♫♫♫♫♫
ಒಂದೇ ನಾಡಿನ ಮಕ್ಕಳು ನಾವು
ಸೋದರರಂತೆ ನಾವೆಲ್ಲಾ
ಒಂದೇ ನಾಡಿನ ಮಕ್ಕಳು ನಾವು
ಸೋದರರಂತೆ ನಾವೆಲ್ಲಾ
ನಿಮ್ಮೊಡನಿಂದೂ ನಾನೂ ನೊಂದೂ
ನಿಮ್ಮೊಡನಿಂದು ನಾನೂ ನೊಂದು
ಮಿಡಿದಾ ಕಂಬನಿ ಆರಿಲ್ಲಾ
ಭರವಸೆ ನೀಡುವೆ ಇಂದು
ನಾ ನಿಮ್ಮೊಡನಿರುವೆನು ಎಂದು
ಭರವಸೆ ನೀಡುವೆ ಇಂದು
ನಾ ನಿಮ್ಮೊಡನಿರುವೆನು ಎಂದು
ತಾಯಿಯ ಆಣೆ ನಿಮ್ಮನು
ಕಾಡುವ ವೈರಿಯ ಉಳಿಸೋಲ್ಲ
ನಾನಿರುವುದೆ ನಿಮಗಾಗೀ
ನಾನಿರುವುದೆ ನಿಮಗಾಗೀ
ನಾಡಿರುವುದು ನಮಗಾಗೀ
ಕಣ್ಣೀರೇಕೇ ಬಿಸಿಯುಸಿರೇಕೇ
ಕಣ್ಣೀರೇಕೆ ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ
ಬಾಳುವಿರೆಲ್ಲ ಹಾಯಾಗೀ
ನಾನಿರುವುದೆ ನಿಮಗಾಗೀ
♫♫♫♫♫♫♫♫♫♫♫♫
ಸಾವಿರ ಜನುಮದ ಪುಣ್ಯವೋ ಏನೋ
ನಾನೀ ನಾಡಲಿ ಜನಿಸಿರುವೆ
ಸಾವಿರ ಜನುಮದ ಪುಣ್ಯವೋ ಏನೋ
ನಾನೀ ನಾಡಲಿ ಜನಿಸಿರುವೆ
ತಪಸಿನ ಫಲವೋ ಹಿರಿಯರ ವರವೋ
ತಪಸಿನ ಫಲವೋ ಹಿರಿಯರ ವರವೋ
ನಿಮ್ಮೀ ಪ್ರೀತಿಯ ಗಳಿಸಿರುವೇ
ವೈರಿಯ ಬಡಿದೋಡಿಸುವಾ
ನಾಡಿಗೆ ಬಿಡುಗಡೆ ತರುವಾ
ವೈರಿಯ ಬಡಿದೋಡಿಸುವಾ
ನಾಡಿಗೆ ಬಿಡುಗಡೆ ತರುವಾ
ಜನತೆಗೆ ನೆಮ್ಮದಿ ಸೌಖ್ಯವ
ತರಲು ಪ್ರಾಣವನೇ ಕೊಡುವೆ
ನಾನಿರುವುದೆ ನಿಮಗಾಗೀ
ನಾನಿರುವುದೆ ನಿಮಗಾಗೀ

ನಾಡಿರುವುದು ನಮಗಾಗೀ
ಕಣ್ಣೀರೇಕೇ ಬಿಸಿಯುಸಿರೇಕೇ
ಕಣ್ಣೀರೇಕೆ ಬಿಸಿಯುಸಿರೇಕೆ
ಬಾಳುವಿರೆಲ್ಲ ಹಾಯಾಗಿ
ಬಾಳುವಿರೆಲ್ಲ ಹಾಯಾಗೀ
ನಾನಿರುವುದೆ ನಿಮಗಾಗೀ

Leave a Reply

Your email address will not be published. Required fields are marked *