ಚಿತ್ರ: ಅನುರಾಧಾ
ಗಾಯನ : ಪಿ ಬಿ ಶ್ರೀನಿವಾಸ್
ತೂಗುವೆ ರಂಗನ
ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
ತೂಗುವೆ ರಂಗನ
ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
♫♫♫♫♫♫♫♫♫♫♫♫
ಮೇಲು ಕೋಟೆಯ ಸ್ವಾಮಿ
ಚೆಲುವರಾಯನ…
ಬೇಲೂರು ಶ್ರೀ ಚೆನ್ನ ಕೇಶವನಾ
ಉಡುಪಿಯಲಿ ವಾಸಿಸುವ ಶ್ರೀಕೃಷ್ಣನ
ಶ್ರೀ ರಂಗಪಟ್ಟಣದಿ ಮಲಗಿದವನ…
ತೂಗುವೆ ರಂಗನ
ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
♫♫♫♫♫♫♫♫♫♫♫♫
ಕಣ್ಣಲ್ಲೆ ಹುಣ್ಣಿಮೆ ತಂದವನ…
ನಗುವಲ್ಲೆ ಮಲ್ಲಿಗೆ ಚೆಲ್ಲುವನ…
ಚೆಲುವಲ್ಲಿ ತಾವರೆಯ ನಾಚಿಸುವನ
ಈ ಮನೆಯ ಬೆಳಕಾಗಿ ಬಂದವನ…
ತೂಗುವೆ ರಂಗನ
ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
♫♫♫♫♫♫♫♫♫♫♫♫
ಆಲದೆಲೆಯ ಮೇಲೆ ಮಲಗಿದವನ
ಹತ್ತವತಾರದ ಪರಮಾತ್ಮನಾ…
ಮತ್ತೆ ನಮಗಾಗಿಳೆಗೆ ಬಂದವನ
ಜಗವನ್ನೇ ತೂಗುವ ಜಗದೀಶನ
ತೂಗುವೆ ರಂಗನ
ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
ತೂಗುವೆ ರಂಗನ
ತೂಗುವೆ ಕೃಷ್ಣನ
ತೂಗಿ ಜೋ ಜೋ ಹಾಡುವೆ
ತೂಗಿ ಜೋ ಜೋ ಹಾಡುವೆ