ಚಿತ್ರ: ಪರಶುರಾಮ
ತಂದಾನ ತಂದಾನ
ಈ ಅಂದ ತಂದಾನ
ಚಂದಾನ ಚಂದಾನ
ನಾನೀಗ ಚಂದಾನ
ಬಾ ಬಾರೋ ಹೇಳು
ನನ್ನ ರಾಜ್ ಕುಮಾರ
ನನ್ನ ರಾಜ್ ಕುಮಾರ
ಹತ್ತೂರಲ್ಲಿ ನಿನ್ನಂಥ ಗಂಡ್ಯಾರಿಲ್ಲಿ
ನೀನಿದ್ದುರಲ್ಲಿ ನೂರೆಂಟು ದಂಡ್ಯಾಕಿಲ್ಲಿ
ತಂದಾನ ತಂದಾನ
ಈ ಅಂದ ತಂದಾನ
ದಂತಾನ ದಂತಾನ
ನಿನ್ನ ಮೈಯ್ಯಿ ದಂತಾನ
ಬಾ ಬಾರೆ ಕೇಳು
ನನ್ನ ರಾಜ್ ಕುಮಾರಿ
ನನ್ನ ರಾಜ್ ಕುಮಾರಿ
ಹತ್ತೂರಲ್ಲಿ ನಿನ್ನಂಥ ಹೆಣ್ಣ್ಯಾರಿಲ್ಲಿ
ನೀನಿದ್ದುರಲ್ಲಿ ನವಿಲಿನ ಹೆಸರ್ ಯಾಕಿಲ್ಲಿ
♫♫♫♫♫♫♫♫♫♫♫♫
ಗುಹೆಯ ಮ್ಯಾಲೆ ಚೂಪಿನ ಕಂಬ
ಹಾಂ
ಕಂಬದ ಮ್ಯಾಲೆ ಪಿಳಿ ಪಿಳಿ ಹಕ್ಕಿ
ಓಹೋ
ಹಕ್ಕಿಗೂ ಮ್ಯಾಲೆ ಕರಿಯ ಬಂಡೆ
ಆಹಾ
ಬಂಡೆಯ ನಡುವೆ ಊರಿಗೆ ದಾರಿ
ಬಾ ಬಾರೋ ಚೆಲುವ
ನನ್ನ ಒಗಟ ಬಿಡಿಸೀಗ
ಜಯಿಸೀಗ ನನ್ನ ಜಡೆಗೆ
ಹೂವ ಮುಡಿಸೀಗ
ಬಾಯಿ ಮೂಗು ಕಣ್ಣು
ಬೈತಲೆಯೆ ದಾರಿ ಹೆಣ್ಣೇ
ಬಾ ಬಾರೋ ಗೆದ್ದೇ
ನನ್ನ ರಾಜ್ ಕುಮಾರ
ನನ್ನ ರಾಜ್ ಕುಮಾರ
ಹತ್ತೂರಲ್ಲಿ ನಿನ್ನಂಥ ಗಂಡ್ಯಾರಿಲ್ಲಿ
ನೀನಿದ್ದುರಲ್ಲಿ ನೂರೆಂಟು ದಂಡ್ಯಾಕಿಲ್ಲಿ
♫♫♫♫♫♫♫♫♫♫♫♫
ಎಳಸಿರುವಾಗ ಹಸುರಿನ ಬಣ್ಣ
ಹ್ಮ್
ವಯಸಿರುವಾಗ ಕೆಂಪನೆ ಬಣ್ಣ
ಹಾಂ
ಮುಪ್ಪಿನ ವೇಳೆ ಕಪ್ಪನೆ ಬಣ್ಣ
ಓಹೋ
ಬಾಯ್ ಗಿಟ್ಟರೆ ಸಾಕು ಓಕುಳಿಯಣ್ಣ
ಬಾ ಬಾರೆ ಚೆಲುವೆ
ನನ್ನ ಒಗಟ ಬಿಡಿಸೀಗ
ಜಯಿಸೀಗ ನನ್ನ ತುಟಿಗೆ
ಖಡಗ ತೋಡಿಸೀಗ
ಹಣ್ಣು ನೇರಳೆ ಹಣ್ಣು
ನನ್ನ ಮ್ಯಾಲೆ ನಿನಗಿದೆ ಕಣ್ಣು
ಬಾ ಬಾರೆ ಗೆದ್ದೇ ನನ್ನ ರಾಜ್ ಕುಮಾರಿ
ನನ್ನ ರಾಜ್ ಕುಮಾರಿ
ಹತ್ತೂರಲ್ಲಿ ನಿನ್ನಂಥ ಹೆಣ್ಣ್ಯಾರಿಲ್ಲಿ
ನೀನಿದ್ದುರಲ್ಲಿ ನೂರೆಂಟು ದಂಡ್ಯಾಕಿಲ್ಲಿ
ತಂದಾನ ತಂದಾನ
ಈ ಅಂದ ತಂದಾನ
ಚಂದಾನ ಚಂದಾನ
ನಾನೀಗ ಚಂದಾನ
ಬಾ ಬಾರೆ ಕೇಳು
ನನ್ನ ರಾಜ್ ಕುಮಾರಿ
ನನ್ನ ರಾಜ್ ಕುಮಾರ
ಹತ್ತೂರಲ್ಲಿ ನಿನ್ನಂಥ ಹೆಣ್ಣ್ಯಾರಿಲ್ಲಿ
ನೀನಿದ್ದುರಲ್ಲಿ ನೂರೆಂಟು ದಂಡ್ಯಾಕಿಲ್ಲಿ
Tandaana Tandaana Song Lyrics
Thandana Thandana Song Lyrics
Tandana Tandana Song Lyrics