ಗಂಡು ಮಗನ ಯಾಕ್ ಹಡದೇ – Gandu magana yaak hadede nannavva Lyrics in Kannada – janapada geethegalu


ಗಂಡು ಮಗನ ಯಾಕ್ ಹಡದೇ ನನ್ನವ್ವಾ


ಗಂಡು ಮಗನ ಯಾಕ್ ಹಡದೇ ನನ್ನವ್ವಾ
ಮುದ್ದಿನಿಂದ ನೀ ಸಾಕಿದೆ ಕೇಳವ್ವಾ
ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗನು ಮಗನಲ್ಲ
ಮಣ್ಣಾಗಿ ಹೊಯತೇ ನಿನ್ನ ಕನಸೆಲ್ಲಾ
ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗನು ಮಗನಲ್ಲ
ಮಣ್ಣಾಗಿ ಹೊಯತೇ ನಿನ್ನ ಕನಸೆಲ್ಲಾ
ಗಂಡು ಮಗನ ಯಾಕ್ ಹಡದೇ ನನ್ನವ್ವಾ
ಅವನ ಮುದ್ದಿನಿಂದ ನೀ ಸಾಕಿದೆ ಕೇಳವ್ವಾ
ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗನು ಮಗನಲ್ಲ
ಮಣ್ಣಾಗಿ ಹೊಯತೇ ನಿನ್ನ ಕನಸೆಲ್ಲಾ

 

ಹತ್ತಾರು ದೇವರಿಗೆ ನೂರಾರು ಹರಕೆ ಕಟ್ಟಿ

ಪಡೆದೆ ನೀ ತಾಯೆಂಬ ಹಿರಿದಾದ ಹಣೆಯ ಪಟ್ಟಿ

ಹತ್ತಾರು ದೇವರಿಗೆ ನೂರಾರು ಹರಕೆ ಕಟ್ಟಿ

ಪಡೆದೆ ನೀ ತಾಯೆಂಬ ಹಿರಿದಾದ ಹಣೆಯ ಪಟ್ಟಿ

ಆ ವೇಳೆಗೆ ವಿಧಿ ನಿನ್ನ ಮಾಡಿತು ವಿಧವೆ
ಆ ವೇಳೆಗೆ ವಿಧಿ ನಿನ್ನ ಮಾಡಿತು ವಿಧವೆ
ಒಂಟಿಯಾದೆ ಬಾಳಲ್ಲಿ ನೀ ವಿಧಿ ಆಟವು ಇದುವೆ

ಒಂಟಿಯಾದೆ ಬಾಳಲ್ಲಿ ನೀ ವಿಧಿ ಆಟವು ಇದುವೆ

ಗಂಡು ಮಗನ ಯಾಕ್ ಹಡದೇ ನನ್ನವ್ವಾ
ಅವನ ಮುದ್ದಿನಿಂದ ನೀ ಸಾಕಿದೆ ಕೇಳವ್ವಾ

ಒಪ್ಪದಿಂದ ಸಾಕಿದೆ ನೀ ಅಪ್ಪನಿಲ್ಲದ ಮಗನ
ಕಷ್ಟ ದುಃಖ ಬಾರದಂಗೆ ಕಷ್ಟದಿಂದ ಅವನ
ಒಪ್ಪದಿಂದ ಸಾಕಿದೆ ನೀ ಅಪ್ಪನಿಲ್ಲದ ಮಗನ
ಕಷ್ಟ ದುಃಖ ಬಾರದಂಗೆ ಕಷ್ಟದಿಂದ ಅವನ
ಅವ್ವಯೆಂದು ಕರೆದಾಗ ಮುದ್ದಿಸಿದೆ ನೀನು

ಅವ್ವಯೆಂದು ಕರೆದಾಗ ಮುದ್ದಿಸಿದೆ ನೀನು

ಕೀಳಾಗಿ ಮಗ ಬಯ್ಯೆ ಆಲಿಸಿದೆ ಅದನು

ಕೀಳಾಗಿ ಮಗ ಬಯ್ಯೆ ಆಲಿಸಿದೆ ಅದನು

ಗಂಡು ಮಗನ ಯಾಕ್ ಹಡದೇ ನನ್ನವ್ವಾ
ಅವನ ಮುದ್ದಿನಿಂದ ನೀ ಸಾಕಿದೆ ಕೇಳವ್ವಾ


ನೆನ್ನೆ ಬಂದ ಹೆಂಡತಿ ಮಾತು ಮಗನಿಗೆ ಹೆಚ್ಚಾಯ್ತು
ತುತ್ತು ಕೊಟ್ಟ ತಾಯಿ ನಿನ್ನ ಮಾತೇ ವಿಷವಾಯ್ತು
ನೆನ್ನೆ ಬಂದ ಹೆಂಡತಿ ಮಾತು ಮಗನಿಗೆ ಹೆಚ್ಚಾಯ್ತು
ತುತ್ತು ಕೊಟ್ಟ ತಾಯಿ ನಿನ್ನ ಮಾತೇ ವಿಷವಾಯ್ತು
ತುತ್ತು ಕೂಳಿಗು ಮಗನ ಗೋಗರೆವ ಗತಿಯಾಯ್ತು
ತುತ್ತು ಕೂಳಿಗು ಮಗನ ಗೋಗರೆವ ಗತಿಯಾಯ್ತು
ಹೆತ್ತ ಅವ್ವ ನಿನ್ನ ಬದುಕು

ಬಿಕ್ಷುಕಿ ಬಾಳಾಯ್ತು
ನೀ ಕಂಡ ಕನಸೆಲ್ಲಾ ಕನಸಾಗೆ ಮಣ್ಣಾಯ್ತು
ಗಂಡು ಮಗನ ಯಾಕ್ ಹಡದೇ ನನ್ನವ್ವಾ
ಗಂಡು ಮಗನ ಯಾಕ್ ಹಡದೇ ನನ್ನವ್ವಾ
ಮುದ್ದಿನಿಂದ ನೀ ಸಾಕಿದೆ ಕೇಳವ್ವಾ
ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗನು ಮಗನಲ್ಲ
ಮಣ್ಣಾಗಿ ಹೊಯತೇ ನಿನ್ನ ಕನಸೆಲ್ಲಾ
ಒಂದು ಕಣ್ಣು ಕಣ್ಣಲ್ಲ ಒಬ್ಬ ಮಗನು ಮಗನಲ್ಲ
ಮಣ್ಣಾಗಿ ಹೊಯತೇ ನಿನ್ನ ಕನಸೆಲ್ಲಾ
ಗಂಡು ಮಗನ ಯಾಕ್ ಹಡದೇ ನನ್ನವ್ವಾ
ಅವನ ಮುದ್ದಿನಿಂದ ನೀ ಸಾಕಿದೆ ಕೇಳವ್ವಾ


Gandu magana yak hadede nannavva Lyrics

Gandu magana Lyrics

Leave a Reply

Your email address will not be published. Required fields are marked *