ಒಲುಮೆಯ ಹೂವೇ – Olumeya hoove Kannada Song Lyrics in Kannada – Punarjanma Kannada Movie Song Lyrics

ಚಿತ್ರ: ಪುನರ್ಜನ್ಮ 

ಸಾಹಿತ್ಯ: R.N ಜಯಗೋಪಾಲ್

ಸಂಗೀತ: ದುಲಾಲ್ ಸೇನ್

ಗಾಯನ: ಪಿ.ಬಿ.ಶ್ರೀನಿವಾಸ್

ಒಲುಮೆಯ ಹೂವೇ
ನೀ ಹೋದೇ ಎಲ್ಲಿಗೇ
ಒಲುಮೆಯ ಹೂವೇ
ನೀ ಹೋದೇ ಎಲ್ಲಿಗೇ
ಉಳಿಸಿ ಕಣ್ಣ ನೀರಾ
ಈ ನನ್ನ ಬಾಳಿಗೇ ಓ ಗೆಳತೀ…
ಒಲುಮೆಯ ಹೂವೇ
ನೀ ಹೋದೇ ಎಲ್ಲಿಗೇ
♫♫♫♫♫♫♫♫♫♫♫♫

ಮಧುಮಯ ಗಾನವದೂ
ನಡುವಲ್ಲೇ ನಿಂದುದೇಕೇ
ಹಗಲಿನ ರಾಜ್ಯದಲೀ
ಕಾರಿರುಳು ಬಂದುದೇಕೇ
ನಿನ್ನಯಾ ಸನಿಹದಲೀ
ನಾ ಕಂಡ ಕನಸುಗಳು
ಸದಾ ಎನ್ನ ಮನದೇ
ನೆನಪಾಗಬೇಕೇ ಓ ಗೆಳತೀ
ಒಲುಮೆಯ ಹೂವೇ
ನೀ ಹೋದೇ ಎಲ್ಲಿಗೇ
♫♫♫♫♫♫♫♫♫♫♫♫

ಬಾಳಿನಾ ನಂದನದೇ
ಹೂವಾಗೀ ನೀ ಬಂದೇ
ಇಂದಲ್ಲಿ ಉಳಿದಿಹುದೂ
ಸೌಗಂಧ ಒಂದೇ
ನಿನ್ನಯಾ ನೋಟಗಳೂ
ನಿನ್ನ ಮೊಗ ನಿನ್ನ ನಗೇ
ಇದೇ ಕಣ್ಗಳೊಳಗೇ
ನೀನೆಲ್ಲೀ ಹೋದೇ ಓ ಗೆಳತೀ
ಒಲುಮೆಯ ಹೂವೇ
ನೀ ಹೋದೇ ಎಲ್ಲಿಗೇ
ಉಳಿಸಿ ಕಣ್ಣ ನೀರಾ
ಈ ನನ್ನ ಬಾಳಿಗೇ ಓ ಗೆಳತೀ
ಒಲುಮೆಯ ಹೂವೇ
ನೀ ಹೋದೇ ಎಲ್ಲಿಗೇ
ಓ ಓ ಗೆಳತೀ ಓಓಓ ಗೆಳತೀ
ಹೂಂ ಹೂಂ ಹೂಂ
ಹೂಂ ಹೂಂ ಹೂಂ



Leave a Reply

Your email address will not be published. Required fields are marked *