ಏಕೋ ಏನೋ -Eko eno e nanna manavu Lyrics in Kannada


ಚಿತ್ರ: ಜ್ವಾಲಾಮುಖಿ 

ರಚನೆ: ಉದಯಶಂಕರ್ 

ಸಂಗೀತ: ಎಂ. ರಂಗರಾವ್ 

ಗಾಯಕ ಡಾ. ರಾಜಕುಮಾರ್, ಲತ 

ಏಕೋ ಏನೋ ನನ್ನ ಮನವು

ಉಯ್ಯಾಲೆಯಾಗಿ ತೂಗಿದೆ

ಏಕೋ ಏನೋ ನನ್ನ ಮನವು

ಉಯ್ಯಾಲೆಯಾಗಿ ತೂಗಿದೆ

ಎಂದು ಕಾಣೆ ನೂರೆಂಟು ಬಯಕೆ
ಎಂದು ಕಾಣೆ ನೂರೆಂಟು ಬಯಕೆ

ಹೊಸ ರಾಗವನ್ನು ಹಾಡಿದೆ 
ಏಕೋ ಏನೋ ನನ್ನ ಮನವು

ಉಯ್ಯಾಲೆಯಾಗಿ ತೂಗಿದೆ
ಎಂದು ಕಾಣೆ ನೂರೆಂಟು ಬಯಕೆ
ಎಂದು ಕಾಣೆ ನೂರೆಂಟು ಬಯಕೆ
ಹೊಸ ರಾಗವನ್ನು ಹಾಡಿದೆ 
ಏಕೋ ಏನೋ ನನ್ನ ಮನವು

ಉಯ್ಯಾಲೆಯಾಗಿ ತೂಗಿದೆ
♫♫♫♫♫♫♫♫♫♫♫♫♫♫

ಬಿಸಿಲಾದರೇನು ಮಳೆಯಾದರೇನು

ಇಂದೇಕೋ ನಾ ಕಾಣೆ ಹಾಯಾಗಿದೆ 
ಹೂವಾದರೇನು ಮುಳ್ಳಾದರೇನು

ಇಂದೇನೊ ನನಗೆಲ್ಲ ಸೊಗಸಾಗಿದೆ 
ಎದೆಯಲ್ಲಿ ಸಂತೋಷ ಕಡಲಾಗಿದೆ
ಎದೆಯಲ್ಲಿ ಸಂತೋಷ ಕಡಲಾಗಿದೆ

ಮನದಲ್ಲಿ ಹೊಸ ಆಸೆ ಕುಣಿದಾಡಿದೆ 

ಏಕೋ ಏನೋ ನನ್ನ ಮನವು

ಉಯ್ಯಾಲೆಯಾಗಿ ತೂಗಿದೆ
♫♫♫♫♫♫♫♫♫♫♫♫♫♫

ಬದುಕೆಲ್ಲ ಹೀಗೆ ಉಲ್ಲಾಸದಿಂದ

ಒಂದಾಗಿ ಇರುವಾಸೆ ನನಗಾಗಿದೆ 
ಅನುರಾಗ ತಂದ ಆನಂದದಿಂದ

ಬಾಳ ಸಂಗೀತ ಹಿತವಾಗಿದೆ 
ನೀನಾಡೊ ಮಾತೆಲ್ಲ ಸವಿಯಾಗಿದೆ
ನೀನಾಡೊ ಮಾತೆಲ್ಲ ಸವಿಯಾಗಿದೆ

ಇಂದೇಕೊ ನನಗೆಲ್ಲ ಹೊಸದಾಗಿದೆ 

ಏಕೋ ಏನೋ ನನ್ನ ಮನವು

ಉಯ್ಯಾಲೆಯಾಗಿ ತೂಗಿದೆ
ಎಂದು ಕಾಣೆ ನೂರೆಂಟು ಬಯಕೆ
ಎಂದು ಕಾಣೆ ನೂರೆಂಟು ಬಯಕೆ

ಹೊಸ ರಾಗವನ್ನು ಹಾಡಿದೆ
ಏಕೋ ಏನೋ ನನ್ನ ಮನವು

ಉಯ್ಯಾಲೆಯಾಗಿ ತೂಗಿದೆ

ಆ ಆ ಆ ಆ ಆ ಆ


ಆ ಆ ಆ ಆ ಆ ಆ

ಆ ಆ ಆ

ಹಾಹಾ

ಆ ಆ ಆ

ಹಾಹಾ

 

Leave a Reply

Your email address will not be published. Required fields are marked *