ಅಳುವ ಕಡಲೊಳು – Aluva Kadalolu Lyrics – Dr.Shimoga Subbanna – Dr Gopalakrishna Adiga – Shruthi Raghavendran

Song:Aluva Kadalolu
Program: Ninnedege Baruvaaga
Singer: Shruthi Raghavendran
Music Director: Dr.Shimoga Subbanna
Lyricist: Dr Gopalakrishna Adiga
Music Label : Lahari Music

ಅಳುವ
ಕಡಲೊಳು ತೇಲಿ ಬರುತಲಿದೆ

ನಗೆಯ
ಹಾಯಿ ದೋಣಿ

ಅಳುವ
ಕಡಲೊಳು ತೇಲಿ ಬರುತಲಿದೆ

ನಗೆಯ
ಹಾಯಿ ದೋಣಿ

ಬಾಳ
ಗಂಗೆಯ ಮಹಾ ಪೂರದೊಳು

ಸಾವಿನೊಂದು
ವೇಣಿ

ನೆರೆತಿದೆ
ಬೆರೆತಿದೆ ಕುಣಿವ ಮೊರೆವ

ತೆರೆ
ತೆರೆಗಳೋಳಿಯಲ್ಲಿ

ಜನನ
ಮರಣಗಳ ಉಬ್ಬುತಗ್ಗು

ಹೊರಳುರುಳುವಾಟವಲ್ಲಿ

 

ಅಳುವ
ಕಡಲೊಳು ತೇಲಿ ಬರುತಲಿದೆ

ನಗೆಯ
ಹಾಯಿ ದೋಣಿ

 

ಆಶೆ
ಬೂದಿ ತಳದಲ್ಲು ಕೆರಳುತಿವೆ

ಕಿಡಿಗಳೆನಿತೋ
ಮರಳಿ

ಆಶೆ
ಬೂದಿ ತಳದಲ್ಲು ಕೆರಳುತಿವೆ

ಕಿಡಿಗಳೆನಿತೋ
ಮರಳಿ

ಮುರಿದು
ಬಿದ್ದ ಮನ ಮರದ ಕೊರಡೊಳು

ಹೂವು
ಹೂವು ಅರಳಿ

ಕೂಡಲಾರದೆದೆಯಾಳದಲ್ಲೂ
ಕಂಡೀತು ಏಕಸೂತ್ರ

ಕೂಡಲಾರದೆದೆಯಾಳದಲ್ಲೂ
ಕಂಡೀತು ಏಕಸೂತ್ರ

ಕಂಡುದುಂಟು
ಬೆಸೆದೆದೆಗಳಲ್ಲು ಭಿನ್ನತೆಯ ವಿಕಟ ಹಾಸ್ಯ

ಅಳುವ
ಕಡಲೊಳು ತೇಲಿ ಬರುತಲಿದೆ

ನಗೆಯ
ಹಾಯಿ ದೋಣಿ

 

ಎತ್ತರೆತ್ತರೆಕೆ
ಏರುವ ಮನಕೂ ಕೆಸರ ಲೇಪ ಲೇಪ

ಎತ್ತರೆತ್ತರೆಕೆ
ಏರುವ ಮನಕೂ ಕೆಸರ ಲೇಪ ಲೇಪ

ಕೊಳೆಯ
ಕೊಳೆಚೆಯಲಿ ಮುಳುಗಿ ಕಂಡನೋ ಬಾನಿನೊಂದು ಪೆಂಪ

ತುಂಬುಗತ್ತಲಿನ
ಬಸಿರನಾಳುತಿದೆ ಒಂದು ಅಗ್ನಿ ಪಿಂಡ

ತುಂಬುಗತ್ತಲಿನ
ಬಸಿರನಾಳುತಿದೆ ಒಂದು ಅಗ್ನಿ ಪಿಂಡ

ತಮದಗಾಧ
ಹೊನಲಲ್ಲು ಹೊಳೆಯುತಿದೆ ಸತ್ವವೊಂದ ಖಂಡ

 

ಅಳುವ
ಕಡಲೊಳು ತೇಲಿ ಬರುತಲಿದೆ

ನಗೆಯ
ಹಾಯಿ ದೋಣಿ

 

ಆಶೆಯೆಂಬ
ತಳ ಒಡೆದ ದೋಣಿಯಲಿ ದೂರ ತೀರಯಾನ

ಆಶೆಯೆಂಬ
ತಳ ಒಡೆದ ದೋಣಿಯಲಿ ದೂರ ತೀರಯಾನ

ಯಾರ
ಲೀಲೆಗೋ ಯಾರೊ ಏನೊ ಗುರಿ ಇಡದೆ ಬಿಟ್ಟ ಬಾಣ

ಇದು
ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ

ಇದು
ಬಾಳು ನೋಡು ಇದ ತಿಳಿದೆನೆಂದರೂ ತಿಳಿದ ಧೀರನಿಲ್ಲ

ಹಲವುತನದ
ಮೈ ಮರೆಸುವಾತವಿದು ನಿಜವು ತೋರದಲ್ಲ

 

ಅಳುವ
ಕಡಲೊಳು ತೇಲಿ ಬರುತಲಿದೆ

ನಗೆಯ
ಹಾಯಿ ದೋಣಿ

ಅಳುವ
ಕಡಲೊಳು ತೇಲಿ ಬರುತಲಿದೆ

ನಗೆಯ
ಹಾಯಿ ದೋಣಿ

ಬಾಳ
ಗಂಗೆಯ ಮಹಾ ಪೂರದೊಳು

ಸಾವಿನೊಂದು
ವೇಣಿ

ನೆರೆತಿದೆ
ಬೆರೆತಿದೆ ಕುಣಿವ ಮೊರೆವ

ತೆರೆ
ತೆರೆಗಳೋಳಿಯಲ್ಲಿ

ಜನನ
ಮರಣಗಳ ಉಬ್ಬುತಗ್ಗು

ಹೊರಳುರುಳುವಾಟವಲ್ಲಿ

 

ಅಳುವ
ಕಡಲೊಳು ತೇಲಿ ಬರುತಲಿದೆ

ನಗೆಯ
ಹಾಯಿ ದೋಣಿ

ನಗೆಯ
ಹಾಯಿ ದೋಣಿ

ನಗೆಯ
ಹಾಯಿ ದೋಣಿ

 


Aluva Kadalolu theli baruthide Lyrics

Leave a Reply

Your email address will not be published. Required fields are marked *