ಅರೆ ತೈ ತೈ ತಂದನ – Are thai thai Thandana Kannada song Lyrics in Kannada | Kotigobba Movie song Lyrics

ಚಿತ್ರ: ಕೋಟಿಗೊಬ್ಬ
ಗಾಯಕ :
ಎಸ್.ಪಿ.ಬಾಲಸುಬ್ರಹ್ಮಣ್ಯಂ
ಸಾಹಿತ್ಯ:ಕೆ.ಕಲ್ಯಾಣ್
ಸಂಗೀತ: ದೇವ
ನಿರ್ದೇಶಕ :ನಾಗಣ್ಣ
ನಟರು:
ವಿಷ್ಣುವರ್ಧನ್,
ಪ್ರಿಯಾಂಕ ಉಪೇಂದ್ರ
ಅರೆ ತೈ ತೈ ತಂದನ
ಎಂಟರೊಳಗೆ ಉಂಟು ನಮ್ಮ ಜೀವನ
ಅರೆ ತೈ ತೈ ತಂದನ
ಎಂಟರೊಳಗೆ ಬೆಳಗಬೇಕು ಜೀವನ
ಎಂಟರ ನಂಟಿನಲ್ಲೇ ಜೀವನ
ಎಂಟರ ಒಗಟಿನಲ್ಲೇ ಜೀವನ
ಒಮ್ಮೆ ಮನಸ ಕೊಟ್ಟು
ಬಾಳ ಗುಟ್ಟು ಕೇಳಣ್ಣ
ಅರೆ ತೈ ತೈ ತಂದನಾ
ಎಂಟರೊಳಗೆ ಉಂಟು ನಮ್ಮ ಜೀವನ
ಅರೆ ತೈ ತೈ ತಂದನ
ಎಂಟರೊಳಗೆ ಬೆಳಗಬೇಕು ಜೀವನ

♬♬♬♬♬♬♬♬♬♬♬♬♬♬♬♬

ಮೊದಲ ಎಂಟು ಹುಡುಗಾಟದ ಮೋಡಿ ಅಲ್ಲ
ಎರಡನೆಯ ಎಂಟು
ವಿದ್ಯೆ ಕಲಿಯೋ ಗರಡಿಯಲ್ಲ
ಹೇ ಹೇ ಹೇ ಹೇ ಹೇ
ಮೊದಲ ಎಂಟು ಹುಡುಗಾಟದ ಮೋಡಿ ಅಲ್ಲ
ಎರಡನೆಯ ಎಂಟು
ವಿದ್ಯೆ ಕಲಿಯೋ ಗರಡಿಯಲ್ಲ
ಮೂರನೇ ಎಂಟು
ಮದುವೆ ಎಂಬ ಜೋಡಿ ಅಲ್ಲ
ಅರೆ ನಾಕನೇ ಎಂಟು ಮಗುವ
ಹೆರುವ ಮುನ್ನುಡಿಯಲ್ಲ
ಎಂಟು ಎಂಟರಂತೆ ಬದುಕು ಬಿಡಿಸಿಕೊ
ಎಂಟು ಎಂಟರಂತೆ ಬದುಕು ಬಿಡಿಸಿಕೊ
ನೀನ್ ಯಾವ ಎಂಟರಲ್ಲಿ ಇರುವೆ ತಿಳಿದುಕೊ
ಅರೆ ತೈ ತೈ ತಂದನ
ಎಂಟರೊಳಗೆ ಉಂಟು ನಮ್ಮ ಜೀವನ
ತೈ ತೈ ತಂದನ
ಎಂಟರೊಳಗೆ ಬೆಳಗಬೇಕು ಜೀವನ

♬♬♬♬♬♬♬♬♬♬♬♬♬♬♬♬

ಐದನೆ ಎಂಟು ಐಶ್ವರ್ಯದ ಸಂಗಮ ವಲ್ಲ
ಆರನೇ ಎಂಟು ವಿಶ್ವ ಸುತ್ತೊ ಸಂಭ್ರಮವಲ್ಲ
ಆಹಾ ಹೊ ಹೊ ಹೇ ಹೇ
ಐದನೆ ಎಂಟು ಐಶ್ವರ್ಯದ ಸಂಗಮ ವಲ್ಲ
ಆರನೆ ಎಂಟು ವಿಶ್ವ ಸುತ್ತೊ ಸಂಭ್ರಮವಲ್ಲ
ಏಳನೆ ಎಂಟು ವಿಶ್ರಾಂತಿಯ ಆಗಮ ವಲ್ಲ
ಎಂಟನೆ ಎಂಟು ನೆಮ್ಮದಿಯ ನಿರ್ಗಮವಲ್ಲ
ಎಂಟು ಎಂಟರಂತೆ ಬದುಕು ಬರೆದುಕೊ
ಹೈ ಎಂಟು ಎಂಟರಂತೆ ಬದುಕು ಬರೆದುಕೊ
ನೀನ್ ಯಾವ ಎಂಟರಲ್ಲಿ ಇರುವೆ ತಿಳಿದುಕೊ
ಅರೆ ತೈ ತೈ ತಂದನ
ಎಂಟರೊಳಗೆ ಉಂಟು ನಮ್ಮ ಜೀವನ
ತೈ ತೈ ತೈ ತಂದನ
ಎಂಟರೊಳಗೆ ಬೆಳಗಬೇಕು ಜೀವನ
ಎಂಟರ ನಂಟಿನಲ್ಲೆ ಜೀವನ
ಎಂಟರ ಒಗಟಿನಲ್ಲೆ ಜೀವನ
ಒಮ್ಮೆ ಮನಸ ಕೊಟ್ಟು ಬಾಳ ಗುಟ್ಟು ಕೇಳಣ್ಣ


Leave a Reply

Your email address will not be published. Required fields are marked *