ಚಿತ್ರ:
ಏಳು ಸುತ್ತಿನ ಕೋಟೆ
ಸಾಹಿತ್ಯ:
ದೊಡ್ಡರಂಗೇಗೌಡ
ಸಂಗೀತ:
ಎಲ್.ವೈಧ್ಯನಾಥನ್
ಗಾಯನ
: ಎಸ್.ಪಿ.ಬಾಲಸುಬ್ರಮಣ್ಯಂ
ಅಂತರಂಗದ
ಹೂ ಬನಕೆ
ಒಲುಮೆ
ಗಾಳಿ ಬೀಸಿ
ಹರುಷ
ತೂಗಿ ತೊನೆದು
ಮಧುರ
ಭಾವ ಮೂಡಿತು
ಅರಿವಿನ
ಈಟಿಯು ಹಗಲಿರುಳು ನಾಟುತ
ಪ್ರೀತಿಯ
ಹೃದಯ ಗಾಯವಾಯಿತು
ಗಾಯವಾಯಿತು
ಅಂತರಂಗದ
ಹೂ ಬನಕೆ
ಮನದೊಳಗೆ
ಚಿಂತೆ ದಿನ ದಿನವು ಕುದಿದು
ಉರಿವ
ಕುಲುಮೆ ಆಯಿತು ತನುವು
ಪ್ರೀತಿ
ಬಿಟ್ಟು ಬಿಡದೆ
ಭೀತಿ
ಕಾಡಿ ಕಾಡಿ
ಅಗ್ನಿ
ಕುಂಡವಾಯಿತು ಒಡಲಾಳವೂ ಒಡಲಾಳವೂ
ಅಂತರಂಗದ
ಹೂ ಬನಕೆ
ನೂರ
ನೋವ ನಡೆವೆ
ನಲಿವ
ಗತ್ತು ಪಡೆದು
ಹೊಸತು
ದಿಕ್ಕು ಕಾಣಹೋಗಿ ಬವಣೆ
ಮುತ್ತಿ
ನಿಂತ ಭಯವ ಮೆಟ್ಟಿ ತುಳಿದು ನಡೆದು
ಸುಗುಮ
ಹಾದಿ ಸಾಗದಾಗಿ ತೊಳಲಾಟವು
ತೊಳಲಾಟವು
ಅಂತರಂಗದ
ಹೂ ಬನಕೆ
ಬದುಕ
ಬಯಲಿನೊಳಗೆ ಒಂಟಿಯಾಗಿ ನಾನು
ಪ್ರೀತಿ
ಹಕ್ಕಿ ಬದಿಗೆ ಬಂದು ತುಮಲ
ವಾಸ್ತವ
ಜಗವ ಮರೆಯುತ ಸಾಗಿ
ಜೊತೆಗಾತಿ
ಸನಿಹ ಮಿಡುಕಾಟವೂ ಮಿಡುಕಾಟವೂ
ಅಂತರಂಗದ
ಹೂ ಬನಕೆ
ಒಲುಮೆ
ಗಾಳಿ ಬೀಸಿ
ಹರುಷ
ತೂಗಿ ತೊನೆದು
ಮಧುರ
ಭಾವ ಮೂಡಿತು
ಆಆಆಆಆಆಆಆ